Monday, September 1, 2008

ಮಚ್ಚು, ಕೊಚ್ಚು - ಕೋಡು, ಬಗ್ಗು...

ನಾವೆನಪ್ಪ ತಪ್ಪ್ ಮಾಡಿರೊದು? ಇವ್ರಿಗೆ ಎಲ್ಲಾರ್ ಲವ್ ಸ್ಟೋರಿನೂ ಅರ್ಥ ಅಗುತ್ತೆ, ಆದ್ರೆ ಸಾಫ್ಟ್ ವೇರ್ ಇಂಜಿನಿಯರ್ಸ್ ಲವ್ ಸ್ಟೋರಿ ಮಾತ್ರ ಕಾಣ್ಸೋದೆ ಇಲ್ವಾ? ಸಾಫ್ಟವೇರ್ ಕೆಲ್ಸ ಮಾಡೊವ್ರಿಗೆ ಹೃದಯನೇ ಇಲ್ಲ ಅನ್ಕೊಂಡಿದಾರಾ?

’ರೇಡಿಯೊ ಮಿರ್ಚಿ’ಲಿ ಹಾಂಗೆ ಒಂದು ಹಾಡು ಬರ್ತಾ ಇತ್ತು. ’ಆ ದಿನಗಳು, ಆ ದಿನಗಳು...’ ಅಂತಾ. ಆ ಹಾಡು ಕೇಳ್ತಾನೆ, ನಂಗೆ ಈ ಯೊಚನೆ ಬರೋಕೆ ಶುರುವಾಯ್ತು. ಇತ್ತೀಚಿಗೆ ಈ ಸಿನಿಮಾ ಮಾಡೊವ್ರಿಗೆ ಅಂಡರ್ ವರ್ಲ್ದ ಬಿಟ್ಟರೆ ಬೇರೆ ಕಥೇನೇ ಸಿಗಲ್ವ ಅಂತ. ಇವ್ರಿಗೆ, ’ಆ ದಿನಗಳ’ಲ್ಲಿ, ಪ್ರೀತಿ ಕಾಣ್ಸುತ್ತೆ, ಆದರೆ ’ಈ ದಿನಗಳಲ್ಲಿ’ ಯಾಕೆ ಕಾಣ್ಸೊಲ್ವೊ?

ಹಾಗೆ ಒಂದು ಸಾರಿ ಯೊಚನೆ ಮಾಡಿ ನೋಡಿ. ನಾನು ಹೇಳ್ತಾ ಇರೊದು ಸರಿನಾ ತಪ್ಪಾ ಅಂತ ನಿಮ್ಗೇ ಗೊತ್ತಾಗುತ್ತೆ. ಹೀರೊ ಸಾಫ್ಟ್ ವೇರ್ ಇಂಜಿನಿಯರ್ ಆಗಿರೊ ಯಾವ್ದಾದ್ರು ಒಂದು ಪಿಚ್ಚರ್ ತೋರ್ಸಿ ಸಾಕು. ’ಮುಂಗಾರು ಮಳೆ’ ಅಂತ ಬಂತು, ಅದ್ರಲ್ಲಿ ತೋಯಿಸ್ಕೊಂಡಿದ್ದು ಒಬ್ಬ ಕೆಲ್ಸ ಇಲ್ದಿರೊ ಪಟ್ಟೆ ಹುಡುಗ ಮತ್ತೆ ಇನ್ನೊಬ್ಬ ಮಿಲಿಟರಿ ಮ್ಯಾನ್. ಮತ್ತೆ ಈ ’ಜೋಗಿ’ - ’ರೋಗಿ’, ’ಮೆಂಟಲ್ಲು - ಡೆಂಟಲ್ಲು ಮಂಜ’, ’ದುನಿಯಾ-ಕರಿಯಾ’, ಎಲ್ಲದ್ರಲ್ಲು ಬರೀ ಅಂಡರ್ ವರ್ಲ್ದೇ. ಸ್ವಲ್ಪ ಹಿಂದಕ್ಕೋದ್ರೆ, ಹೀರೊ ಒಬ್ಬ ಡಾಕ್ಟರೊ, ಇಲ್ಲ ಪತ್ರಕರ್ತನೋ, ಅಥವಾ ಲಾಯರೋ, ಇನಿಸ್ಪೆಕ್ಟರೋ ಆಗಿರ್ತಾನೆ. ಇಂಜಿನಿಯರ್ಸೂ ಈ ಜಗತ್ತಲ್ಲಿ ಇದಾರೆ, ಅವ್ರ ಮಧ್ಯದಲ್ಲೂ ಪ್ರೀತಿ, ಪ್ರಣಯ, ಸರಸ, ವಿರಸ ಇರ್ತವೆ ಅನ್ನೋದು ಇವ್ರಿಗೆ ಕಾಣ್ಸೋದೇ ಇಲ್ವಾ?

ಹು, ಆ ’ಅಮೇರಿಕ-ಅಮೇರಿಕ’ ದಲ್ಲಿ ಮಾತ್ರ ಆ ’ಶಶಾಂಕ’ ಸಾಫ್ಟವೇರ್ ಇಂಜಿನಿಯರ್ ಆಗಿರ್ತಾನಪ್ಪ. ಆದ್ರೆ ಎನ್ಬಂತು, ಕೊನೆಗೆ 'ಭೂಮಿ'ನಾ ಹಾರಿಸ್ಕೊಂಡು ಬರೋದು ’ಸೂರ್ಯ’ ತಾನೆ? ಅದು ಅಲ್ಲದೇ, ಪಾಪ ಆ ’ಶಶಾಂಕನ್ನ’ ಸಾಯಿಸೇ ಬಿಡ್ತಾರಲ್ರೀ...

ಇದೆಲ್ಲಾ ಯಾಕೆ ಹೇಳ್ದೆ ಅಂದ್ರೆ, ಈಗ್ನೋಡಿ, ನಮ್ಮಲ್ಲಿ ಎಷ್ಟೊಂದು ಸಾಫ್ಟವೇರ್ ಕಂಪನಿಗಳು ಇದಾವಲ್ವಾ? ಬೆಂಗಳೂರಿನಲ್ಲಿ ಆಗೂ ಒಂದು ಐವತ್ತು ಪರ್ಸೆಂಟು ಲವ್ ಸ್ಟೋರುಗಳು ಸಾಫ್ಟವೇರ್ ಇಂಡಸ್ಟ್ರೀಯಲ್ಲೇ ಶುರು ಆಗೋದು ಅಂತ ನಂಗನ್ಸುತ್ತೆ. ಒಕೆ, ಐವತ್ತು ಪರ್ಸೆಂಟು ಅನ್ನೊದು ಎಗ್ಜಾಗಿರೇಶನ್ ಅನ್ಸುತ್ತಾ? ಹಾಗದ್ರೆ ಒಂದು ಮುವತ್ತು ಪರ್ಸೆಂಟು ಅಂತಾ ಇಟ್ಕೊಳ್ಳಿ. ಅದೂ ಹೆಚ್ಚೇ ಅಲ್ವಾ? ನಿಮ್ಗೊತ್ತಾ, ಆ ’ವಿಪ್ರೋ’ ಕಂಪನಿನಾ, ’ಲವರ್ಸ್ ಪ್ಯಾರಡೈಸ್’ ಅಂತಾರೆ. ಅಲ್ಲಿ ಅರ್ಧಕ್ಕರ್ದ ಲವ್ ಬರ್ಡ್ಸೇ. ಇನ್ನು ಇನ್ಫೋಸಿಸ್ ತೊಗೋಳಿ. ಅಲ್ಲೂ ಅದೇ ಕಥೆನೇ. ಹಾಗೆ, ಈ ಐಬಿಎಮ್ಮು, ಟಿಸಿಎಸ್ಸು, ಅದು, ಇದು, ಅಂತಾ ಸಾವಿರ ಕಂಪನಿಗಳಲ್ಲಿ ಏನಿಲ್ಲ ಅಂದ್ರು ಎರ್ಡು ಸಾವಿರ ಜೋಡಿಗಳಾದ್ರು ಸಿಗೋಲ್ವಾ?. ಇನ್ನು ಈ ಕಾಲ್ ಸೆಂಟರ್ಸ್ ನ ತೊಗೊಂಡ್ರೆ, ಅಲ್ಲಿ ಮಸಾಲೆ ಐಟಮ್ಸ್ ಗಳಿಗೇನು ಬರಾನಾ?. ತಿಂಗಳಿಗೆ ಒಂದಾದ್ರು ಅಬಾರ್ಶನ್ ಕೇಸು ಗ್ಯಾರಂಟಿ. ಇನ್ನು ವಿಲನ್ಸ್ ಬೇಕಾ, ಮ್ಯಾನೆಜರ್ಸ್ ಗಳೆಲ್ಲ ಅವರೇ. ಪೋಷಕ ನಟರು ಬೇಕು ಅಂದ್ರೆ, ಲವ್ ವಿರೋಧಿಸೋ ಅಪ್ಪ ಅಮ್ಮ ಇರ್ತಾರಲ್ಲ. ಹಂಗೆ, ಫಾರಿನ್ ಲೊಕೆಶನ್ ಬೇಕು ಅಂದ್ರೆ, ಆನ್ ಸೈಟ್ ಅಂತಾ ಹೋಗಿ, ಅಲ್ಲೇ ಲವ್ವಲ್ಲಿ ಬಿದ್ದು, ಅಲ್ಲೇ ಸೆಟ್ಟಲ್ ಆಗಿರೋರಿಗೂ ಕಮ್ಮಿ ಇಲ್ಲ. ಮತ್ತೆ ಇಷ್ಟು ಸಾಕಾಗ್ದಾ ಒಂದು ಒಳ್ಳೆ ಸಿನಿಮಾ ಮಾಡೋಕೆ?


ಅದ್ಕೆ, ನಾನು ಹೇಳೋದು ಕೇಳಿ. ಜನ್ರಿಗೆ ಈ ಮಚ್ಚು, ಕೊಚ್ಚು, ಹುಚ್ಚು, ಕಿಚ್ಚು, ಎಲ್ಲಾ ನೋಡಿ ತಲೆ ಕೆಟ್ಟೋಗಿದೆ. ಅದ್ರಲ್ಲೂ ಆ ಹೀರೋ ಮುಖಗಳೋ... ಅದ್ಕೇ ನೋಡಿ ವಾರಕ್ಕೆ ಎರಡರಿಂದ ಮೂರು ಪಿಚ್ಚರ್ ಬಂದ್ರೂ ಅದ್ರಲ್ಲಿ ಒಂದಾದ್ರೂ ಒಂದತ್ತ್ ದಿನ ಓಡ್ತಾವಾ? ಯಾಕಂದ್ರೆ ಜನ ಚೇಂಜ್ ಕೇಳ್ತಾರೆ! ಅದೇ ಸಾಫ್ಟವೇರ್ ಇಂಡಸ್ಟ್ರೀಗೆ ಬಂದ್ರೆ, ಇಲ್ಲಿ, ದುಡ್ಡಿದೆ, ಲವ್ ಇದೆ, ರೋಮ್ಯಾನ್ಸ್ ಇದೆ, ನಾನ್ ಸೆನ್ಸೂ ಇದೆ. ಆ ಕರೀ ಗಾಜಿನ ಜಗಮಗಿಸುವ ಬಿಲ್ಡಿಂಗ್ ಒಳಗೆ ನೋವೂ ಇದೆ. ಪ್ರಜರ್ರು, ಫ್ರಸ್ಟ್ರೇಶನ್ನು ಜೊತೆಗೆ ಅವಮಾನ, ಅನುಮಾನ, ಎಲ್ಲಾ ಇದೆ. ಇದೆಲ್ಲಾ ಸೇರ್ಸಿ ಒಂದು ಮಸಾಲೆ ಸಿನಿಮಾ ಮಾಡಿದ್ರೆ ಹೇಗಿರುತ್ತೇ ನೀವೇ ಹೇಳಿ?


ಹು, ಇಷ್ಟೆಲ್ಲಾ ಹೇಳಿದ್ ಮೇಲೂ ಜನ ಅದೇ ಮಚ್ಚು, ಕೊಚ್ಚು ಅಂತಾ ಸಿನಿಮಾ ಮಾಡ್ತಿದ್ರೆ, ಇವ್ರ ಮೇಲೇನು ಬಗ್ ರೈಸ್ ಮಾಡೊಕಾಗುತ್ತ...?

8 comments:

vivek said...

ತಮಗಾಗಿ ಹೊಸ ಹಿಂದಿ ಚಲನಚಿತ್ರ ಬರುತ್ತಿದೆ ಹೆಸರು: "Hello"

Unknown said...

ನೀವು ಹೇಳೊದೆಲ್ಲ ಸರಿ ಸ್ವಾಮಿ, ನಿಮ್ಮ ಕತೆನ ಸಿನಿಮಾ ಮಾಡೋಕೆ ನಾನ್ ತಯಾರ್, ದುಡ್ಡು ಹಾಕೊಕೆ ನೀವ್ ತಯಾರಾ?

Shridhar Sahukar said...

shivu - ಏನ್ರಿ, ಮಾತಡ್ಸಿದ್ರೆ ಮೈಮೇಲೇ ಬರ್ತಿರಲ್ರಿ...:-)

btw, please enable your profile as "shared" one, so that others can view it.

Gubbachchi Sathish said...

Good idea! I am writing a script based on this. Thanks for your valuable suggestion.

jomon varghese said...

ನಮಗೂ ಒಂದು ಛಾನ್ಸು ಕೊಡಿ.. :) ಹಾಕಿದ ದುಡ್ಡು ವಾಪಾಸ್ಸು ಬರದಂತೆ ನೋಡಿಕೊಳ್ಳುತ್ತೇವೆ. ಒಳ್ಳೆಯ ಬರಹ.

Lakshmi Shashidhar Chaitanya said...

ಸಖತ್ ಪ್ರಶ್ನೆ.ನೀವು ಪಿಕ್ಚರ್ ನಿರ್ಮಿಸಿ...ನಾವು ನೋಡಿ ಆನಂದಿಸುತ್ತೇವೆ.

Anonymous said...

Monne ondu movie bandithu software engineers-dhu.. "Anthu inthu preethi banthu" antha.. Adre nam project thara adu flop aagoithu... :-( :-(

sunaath said...

ಸೂಪರ್ ಐಡಿಯಾ! ನೋಡ್ತಾ ಇರಿ. Software engineerಗಳ ಮೇಲೆ ಸಿನೆಮಾ ಬಂದೇ ಬರ್ತಾವೆ!