ಇದೇನ ಸಭ್ಯತೆ, ಇದೇನ ಸಂಸ್ಕೃತಿ,
ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ,
ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||
ಎನಿತು ದೇಶ ಭಕ್ತರು, ಹರಿಸಿ ತಮ್ಮ ನೆತ್ತರು,
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು,
ಅಮರ ರಾಮ ರಾಜ್ಯದ ಕನಸು ಕಂಡೆವಂದು,
ಬರಿಯ ಬೇಧ ಭಾವವ ಕಾಣುತಿಹೆವು ಇಂದು...
ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||
ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು,
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು,
ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ,
ಗಾಂಧಿ, ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ...
ಇದೇನ ಸಭ್ಯತೆ, ಇದೇನ ಸಂಸ್ಕೃತಿ... ||
ದೇಶದಾ ಸಮಸ್ಯೆಗಳು ಇರಲು ಕೋಟಿ ಕೋಟಿ,
ಅದನು ಮರೆತು ಸಾಗಿದೆ ಫ್ಯಾಶೆನ್ನಿನ ಪೈಪೋಟಿ,
ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆಯಿಲ್ಲ,
ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ...
ಇದೇನ ಸಭ್ಯತೆ, ಇದೇನ ಸಂಸ್ಕೃತಿ,
ಇದೇನ ನಮ್ಮ ಸತ್ಯತೆ, ಇದೇನ ನಮ್ಮ ಜಾಗ್ರತೆ,
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ ...
-----------------------------------------------
ಚಿತ್ರ : ಮಣ್ಣಿನ ಮಗ. ಸಂಗೀತ: ಜಿ. ಕೆ. ವೆಂಕಟೇಶ್
ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ
Sync clocks using ntp on Linux
16 years ago
No comments:
Post a Comment